Breaking
Thu. Nov 6th, 2025

ಅಥ್ಲೇಟಿಕ್ಸ್ನಲ್ಲಿ ಜೆ.ಎಸ್.ಎಸ್ ಸಿ.ಬಿ.ಎಸ್.ಇ ಶಾಲೆ ವೀರಾಗ್ರಣಿ

.ಅಥ್ಲೇಟಿಕ್ಸ್ನಲ್ಲಿ ಜೆ.ಎಸ್.ಎಸ್ ಸಿ.ಬಿ.ಎಸ್.ಇ ಶಾಲೆ ವೀರಾಗ್ರಣಿ
ಧಾರವಾಡ : ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕ ಸಹೋದಯದ ವತಿಯಿಂದ ಗದಗದ ಜೆ.ಜಿ ಅಂತರಾಷ್ಟ್ರೀಯ ಶಾಲೆಯಲ್ಲಿ ಆಯೋಜಿಸಿದ್ದ ೧೪ ವರ್ಷದೊಳಗಿನ ಕಿರಿಯರ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳು ೯ ಚಿನ್ನದ ಪದಕ, ೧ ಬೆಳ್ಳಿ ಪದಕ, ೩ ಕಂಚಿನ ಪದಕಗಳನ್ನು ಪಡೆದಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರ ವೀರಾಗ್ರಣಿ ಹಾಗೂ ಸಮಗ್ರ ವೀರಾಗ್ರಣಿಯನ್ನು ತಮ್ಮದಾಗಿಸಿಕೊಂಡು ಸಂಸ್ಥೆಗೆ ಕೀರ್ತಿಯನ್ನು ತಂದಿದ್ದು, ಇವರನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಪ್ರಾಚಾರ್ಯೆ ಸಾಧನಾ ಎಸ್. ಹಾಗೂ ಮಹಾವೀರ ಉಪಾದ್ಯೆ ಅಭಿನಂದಿಸಿದ್ದಾರೆ.

Related Post