ಮಹಿಳಾ ಸಾಧಕಿ ಸರಸ್ವತಿ ಪೂಜಾರ ಅವರಿಗೆ ಕಿತ್ತೂರು ಉತ್ಸವದಲ್ಲಿ ಸರ್ಕಾರದಿಂದ ಗೌರವ ಸನ್ಮಾನ
ಬೆಳಗಾವಿ : ಜಿಲ್ಲೆಯ ಕಿತ್ತೂರಿನ ಸಮಾಜ ಸೇವಕೀ ಹಾಗೂ ನ್ಯಾಯವಾದಿ ಶ್ರೀಮತಿ ಸರಸ್ವತಿ ಪೂಜಾರ ಅವರಿಗೆ ಕರ್ನಾಟಕ ಸರ್ಕಾರ ಆಯೋಜಿಸಿರುವ ಕಿತ್ತೂರು ಉತ್ಸವ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಅವರ ಮಹಿಳಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಮಾನ್ಯ ಜಿಲ್ಲಾಧಿಕಾರಿಗಳು ಅವರನ್ನು “ಗೌರವ ಸನ್ಮಾನಕ್ಕೆ” ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇಂದು ಸಂಜೆ ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆ, ಕೋಟೆ ಆವರಣ ಉತ್ಸವದ ಉದ್ಘಾಟನೆಯ ವೇದಿಕೆಯಲ್ಲಿ ಶ್ರೀಮತಿ ಸರಸ್ವತಿ ಪೂಜಾರ ಅವರನ್ನು ರಾಜಗುರು ಸಂಸ್ಥಾನ ಕಲ್ಮಠ ಶ್ರೀ ಮ.ನಿ.ಪ್ರ.ಸ್ವ. ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು, ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಶ್ರೀ. ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಲೋಕೋಪಯೋಗಿ ಸಚಿವರು, ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೋಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಶಾಸಕರು, ಕಿತ್ತೂರು ವಿಧಾನಸಭಾ ಮತಕ್ಷೇತ್ರ ಬಾಬಾಸಾಹೇಬ ಪಾಟೀಲ್, ಮಾನ್ಯ ಸರ್ಕಾರಿ ಮುಖ್ಯ ಸಚೇತಕರು , ಕರ್ನಾಟಕ ವಿಧಾನಸಭೆ ಅಶೋಕ್ ಮ. ಪಟ್ಟಣ, ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ -2, ನವದೆಹಲಿ ಹಾಗೂ ಸಂಸದರೆಲ್ಲರು ಸೇರಿ ಸನ್ಮಾನಿಸಿ ಗೌರವಿಸಲಿದ್ದಾರೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

