ಧಾರವಾಡ 02 : ರಾಜ್ಯ ಮಾದಿಗ ವಿಧ್ಯಾರ್ಥಿ ಒಕ್ಕೂಟ ದಿಂದ ಒಳಮೀಸಲಾತಿ ಅನುಷ್ಠಾನಕ್ಕಾಗಿ
ಸರ್ಕಾರದಿಂದ ನೇಮಿಸಲ್ಪಟ್ಟ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಏಕಸದಸ್ಯ ವಿಚಾರಣಾ ಆಯೋಗವನ್ನು ಭೇಟಿಯಾಗಿ, ಒಳಮೀಸಲಾತಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಮಾದಿಗ ಮತ್ತು ಮಾದಿಗ ಸಂಬಂಧಿತ ಉಪಕುಲಗಳಿಗೆ ಮತ್ತು ಇತರ ಒಳಮೀಸಲಾತಿ ಪರವಾಗಿ ಇರುವ ಜಾತಿಗಳಿಗೆ ಸಾಮಾಜಿಕ ನ್ಯಾಯದ ಅನ್ವಯ ಪ್ರತ್ಯೇಕವಾಗಿ ಒಳಮೀಸಲಾತಿಯನ್ನು ಶೀಘ್ರವಾಗಿ ಘೋಷಿಸಲು ಒತ್ತಾಯಿಸಲಾಯಿತು. ರಾಜ್ಯ ಮಾದಿಗ ವಿಧ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಾದ ಅಜೀತ ಮ್ಯಾಗಡಿ, ಮಂಜುನಾಥ , ತರುಣ್ ,ಪರಸಪ್ಪ ಮುಂತಾದವರು ಉಪಸ್ಥಿತರಿದ್ದರು
