Breaking
Thu. Nov 6th, 2025

ಎಸ್‌.ಜೆ.ಎಂ.ವಿ.ಮಹಾಂತ ಕಾಲೇಜಿನ ವಿದ್ಯಾರ್ಥಿ ಯೋಗಾ ಬ್ಲೂ ಆಗಿ ಆಯ್ಕೆ . 

ಎಸ್‌.ಜೆ.ಎಂ.ವಿ.ಮಹಾಂತ ಕಾಲೇಜಿನ ವಿದ್ಯಾರ್ಥಿ ಯೋಗಾ ಬ್ಲೂ ಆಗಿ ಆಯ್ಕೆ .                                          ದಾರವಾಡ : ರಾಯಾಪುರದಲ್ಲಿರುವ ಎಸ್‌.ಜೆ.ಎಂ.ವಿ.ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಬಿ. ಎ. ಐದನೇಯ ಸೆಮಿಸ್ಟರ್ ವಿದ್ಯಾರ್ಥಿ ಸಂದೀಪ ನಡಗೇರಿ, ಪ್ರಸಕ್ತ 2023 24ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಯೋಗಾ ಬ್ಲೂ ಆಗಿ ಆಯ್ಕೆಯಾಗಿದ್ದಾನೆ. ಅಲ್ಲದೇ ಡಿಸೆಂಬರ್ ಒಂದರಿಂದ ನಾಲ್ಕರವರೆಗೆ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಕ್ಷಿಣ ವಲಯ /ದಕ್ಷಿಣ /ಪಶ್ಚಿಮ ವಲಯ ,ಅಖಿಲ ಭಾರತ ಅಂತರ ವಿಶ್ವವಿಧ್ಯಾಲಯ ಯೋಗಾ ಟೂರ್ನಮೆಂಟ್/ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾನೆ. ಕಾರಣ ವಿದ್ಯಾರ್ಥಿ ಸಂದೀಪ್ ನಡಗೇರಿಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶಾಂತಯ್ಯ ಕೆ. ಎಸ್. ಹಾಗೂ ಮಹಾವಿದ್ಯಾಲಯದ ಸಮಸ್ತ ಪ್ರಾಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

Related Post