ಕರ್ನಾಟಕ ಸಂಭ್ರಮ ೫0 ಕನ್ನಡದ ಹೆಸರಾಂತ ಕವಿಗಳ ಹಾಡುಗಳಿಗೆ ವಿಶೇಷ ನೃತ್ಯೋತ್ಸವ. ಧಾರವಾಡ :ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ)ಧಾರವಾಡ ಕರ್ನಾಟಕ ಸಂಭ್ರಮ ೫0 ಕನ್ನಡದ ಹೆಸರಾಂತ ಕವಿಗಳ ಹಾಡುಗಳಿಗೆ ವಿಶೇಷ ನೃತ್ಯೋತ್ಸವ ಕಾರ್ಯಕ್ರಮ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.೧೯ತಂಡಗಳಿಂದ ವಿಶೇಷ ನೃತ್ಯೋತ್ಸವ ಕಾರ್ಯಕ್ರಮ ನಡೆಯಿತು ಧಾರವಾಡದ ವಿದುಷಿ ನಾಗರತ್ನ ಹಡಗಲಿ ಶಿಷ್ಯ ಬಳಗದಿಂದ ಕೆ ಎಸ್ ನರಸಿಂಹಸ್ವಾಮಿ ರಚಿತ ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬದುಕು. ಈ ಹಾಡಿಗೆ ನೃತ್ಯ ಮಾಡಿರುವುದು ವಿಶೇಷವಾಗಿತ್ತು.

