ನವಂಬರ್ 20ರಂದು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ನೇಮಕಾತಿ ಮಾಡಿಕೊಳ್ಳವಂತೆ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ. ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ 3-4 ವರ್ಷಗಳಿಂದ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ನೇಮಕಾತಿ ಮಾಡಲು 1.7.23 ರಂದು ಭೌತಿಕವಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಇಲ್ಲಿಯವರೆವಿಗೂ ನೇಮಕಾತಿ ಮಾಡಲು ಅಧಿಕಾರಿಗಳು ಯಾವ ಪ್ರಕ್ರಿಯೆಯನ್ನು ಕೈಗೊಂಡಿಲ್ಲದೇ ಇರುವುದರಿಂದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ವತಿಯಿಂದ ದಿನಾಂಕ 20.11.2023ರಿಂದ ಅನಿರ್ದಿಷ್ಟ ಕಾಲ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ,ಎಂ.ಜಯಮ್ಮರಾಜ್ಯ ಪ್ರ.ಕಾರ್ಯದರ್ಶಿ ತಿಳಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 2877 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ 430, ಸಹಾಯಕಿಯರ ಹುದ್ದೆ 1198 ಹುದ್ದೆಗಳ_3-4 ವರ್ಷಗಳಿಂದ ಖಾಲಿ ಇರುತ್ತದೆ. ಇರುವ ಹುದ್ದೆಗಳಿಗೆ ಜಿಲ್ಲಾಧಿಕಾರಿಗಳು ಉಪನಿರ್ದೇಶಕರ ಅನುಮತಿ ಮೇರೆಗೆ ದಿನಾಂಕ 05.03.2023 ರಂದು ಭೌತಿಕವಾಗಿ ಆಯ್ಕೆ ಮಾಡಲು ಪ್ರಕಟಣೆ ಹೊರಡಿಸಿದ್ದು, ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿಗಳು ಸ್ವೀಕೃತವಾಗಿರುತ್ತವೆ. ಆದರೆ ಇಲ್ಲಿಯವರೆಗೂ ನೇಮಕಾತಿ ಮಾಡಿಕೊಳ್ಳಲು ಯಾವುದೇ ಪ್ರಕ್ರಿಯೆಯನ್ನು ಉಪನಿರ್ದೆಶಕರು, ಯೋಜನಾಧಿಕಾರಿಗಳು ಕೈಗೊಂಡಿರುವುದಿಲ್ಲ. ಕೈಗೊಳ್ಳಬೇಕೆಂದು ಎಷ್ಟು ಭಾರಿ ಪತ್ರ ವ್ಯವಹಾರವನ್ನು ಸಚಿವರಿಗೆ, ಕಾರ್ಯದರ್ಶಿ, ನಿರ್ದೇಶಕರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವ ಪ್ರಕ್ರಿಯೆಯನ್ನು ಕೈಗೊಂಡಿಲ್ಲ. ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು ಖಾಲಿ ಇರುವ ಕೇಂದ್ರಗಳಲ್ಲಿ ಒಟ್ಟರ ಕಾರ್ಯ ನಿರ್ವಹಿಸಲು ಕಷ್ಟ ಸಾಧ್ಯವಾಗಿದೆ.
ಅಗನವಾಡಿ ಮಕ್ಕಳಿಗೆ 9.30 4.00 ಗಂಟೆಯವರೆಗೆ ಉಪಹಾರ, ಶಾಲಾಚಟುವಟಿಕೆಗಳು, ಬಿ.ಎಲ್.ಓ ಗೃಹಲಕ್ಷ್ಮಿ ಆರೋಗ್ಯ ಸಮೀಕ್ಷೆ, ಪೋಷಣ್ ಟ್ರಾಕ್ ಪ್ರತಿನಿತ್ಯದ ನಿರ್ವಹಣೆ ಹಾಗೂ ಅಂಗನವಾಡಿ ಸ್ವಚ್ಛತೆ, ಪಾತ್ರ ತೊಳೆಯುವುದು, ಸ್ವಚ್ಛಗೊಳಿಸುವುದು ಹಾಗೂ ಮಕ್ಕಳ ಶೌಚಾಲಯ ಸ್ವಚ್ಛಗೊಳಿಸುವ ವ್ಯವಸ್ಥೆ ಎಂ.ಪಿ.ಆ ಮೀಟಿಂಗ್, ಗೌರವಧನ ಸಭೆಗೆ ಹಾಜರಾಗುವುದು ಇವೆಲ್ಲವನ್ನು ಒಬ್ಬ ಕಾರ್ಯಕರ್ತೆಯಿಂದ ಮಾಡಲು ಸಾಧ್ಯವಾಗುತ್ತಿಲ್ಲ, ಯಾವ ಪೋಷಕರನ್ನು ಸಹಾಯ ಕೇಳಿದರೆ ಒಂದು ದಿನ ಮಾಡುತ್ತಾರೆ. ಮಾರನೇ ದಿನ ನಮ್ಮನ್ನು ನೋಡದೇ ಮಕ್ಕಳನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ನಗರ ಪ್ರದೇಶಗಳಲ್ಲಿ ಮಕ್ಕಳು ಮತ್ತು ಫಲಾನುಭವಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ. ಕಾರ್ಯಕರ್ತೆಯರೇ ಸ್ವಚ್ಛತೆ ಮಾಡಲು ತಮ್ಮ ಸಂಬಳದಲ್ಲಿ 500-1000 ಗಳನ್ನು ನೀಡಿ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿಯು 4 ವರ್ಷಗಳಿಂದ ಬಂದಿರುತ್ತದೆ.
ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 3-4 ವರ್ಷಗಳಿಂದ ಇದೇ ರೀತಿ ಅಂಗನವಾಡಿ ಕಾರ್ಯಕರ್ತ ಸಹಾಯಕಿಯರನ್ನು ಕಾಲಕಾಲಕ್ಕೆ ನೇಮಕಾತಿ ಮಾಡುವಲ್ಲಿ ವಿಳಂಬವಾಗುತ್ತಿದೆ. ಈಗಾಗಲೇ ಭೌತಿಕವಾಗಿ ಅಭ್ಯರ್ಥಿಗಳಿಂದ ಸ್ವೀಕೃತವಾಗಿರುವ ಅರ್ಜಿಗಳನ್ನು ಸಪರಿಶೀಲಿಸಿ ತುರ್ತಾಗಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಲು ಸಚಿವರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆವಿಗೂ ಬೇಡಿಕೆ ಈಡೇರಿರುವುದಿಲ್ಲವಾದರಿಂದ ದಿನಾಂಕ 20.11.2023ರಂದು 11.00 ಗಂಟೆಯಿಂದ ಅನಿರ್ಧಿಷ್ಟ ಕಾಲದವರೆಗೆ ಬೆಂಗಳೂರು ಉದ್ಯಾನವನ (ಫ್ರೀಡಂ ಪಾರ್ಕ್) ನಲ್ಲಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈ ಪ್ರತಿಭಟನೆಯ ನೇತೃತ್ವವನ್ನು
ಬಿ.ಅಮ್ಜದ್ ರಾಜ್ಯಾಧ್ಯಕ್ಷರು,ಎಂ.ಜಯಮ್ಮರಾಜ್ಯ ಪ್ರ.ಕಾರ್ಯದರ್ಶಿ,ವೈ.ಡಿ. ಗಿರಿಜ ಜಿಲ್ಲಾಧ್ಯಕ್ಷರು,
ಕಮಲಮ್ಮ ಜಿಲ್ಲಾಕಾರ್ಯದರ್ಶಿ ವಹಿಸಲಿದ್ದಾರೆ

