ಭವ್ಯಭಾರತದ ನಿರ್ಮಾಣಕರ್ತ ಪಂ . ಜವಾಹರಲಾಲ ನೆಹರು.ಬಸವರಾಜ ಗುರಿಕಾರ
ಧಾರವಾಡ:—ನಗರದ ನೌಕರರ ಭವನದಲ್ಲಿ ಭಾರತದ ಪ್ರಪ್ರಥಮ ಪ್ರಧಾನಿ ಪಂ . ಜವಾಹರಲಾಲ ನೆಹರುರವರ 135 ನೇ ಜನ್ಮದಿನವನ್ನು ಕೆಪಿಸಿಸಿ ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷರಾದ ಬಸವರಾಜ ಗುರಿಕಾರ ಆಧ್ಯಕ್ಷತೆಯಲ್ಲಿ ಆಚರಿಸಲಾಯಿತು .
ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಸದಸ್ಯ ರಾಬರ್ಟ ದದ್ದಾಪುರಿ ಆಗಮಿಸಿದ್ದರು ಪಂಚವಾರ್ಷಿಕ ಯೋಜನೆಗಳ ರೂವಾರಿ , ಭವ್ಯಭಾರತದ ನಿರ್ಮಾಣಕರ್ತ ಪಂ . ಜವಾಹರಲಾಲ ನೆಹರುರವರ ದೂದೃಷ್ಟಿಯನ್ನು ಸಭೆಯಲ್ಲಿ ಕೊಂಡಾಡಲಾಯಿತು .
ಕೆಪಿಸಿಸಿ ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷರಾದ ಬಸವರಾಜ ಗುರಿಕಾರ ಮಾತನಾಡಿ, ನೆಹರು ಅವರ ಆಶಯದಂತೆ ಆವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯೆಂದು ಆಚರಿಸುತ್ತಿರುವುದು ದಿ . ಪ್ರಧಾನಿಗಳು ಭಾರತದ ಭವಿಷ್ಯದ ನಾಗರಿಕರ ಬಗ್ಗೆ ಇಟ್ಟಿಕೊಂಡ ಪ್ರೀತಿಗೆ ಸಾಕ್ಷಿ ಎಂದ ಅವರು ಪಂ . ಜವಾಹರಲಾಲ ನೆಹರುರವರು ತಾವು ಪ್ರಧಾನಿಯಾಗಿದ್ದಾಗ ಆಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ – ಏಐಎಮ್.ಎಸ್ . ಭಾರತೀಯ ತಂತ್ರಜ್ಞಾನ ಸಂಸ್ಥೆಗಳು – ಐಐಟಿ , ಭಾರತೀಯ ಆಡಳಿತ ನಿರ್ವಹಣೆ ಸಂಸ್ಥೆ – ಐಐಎಂ ಈ ರೀತಿಯ ಅನೇಕ ಶಿಕ್ಷಣ ಸಂಸ್ಥೆಗಳನ್ನು ಭಾರತದ ಅಭಿವೃದ್ಧಿಗಾಗಿ ಸ್ಥಾಪಿಸಿದರು . ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಮೊದಲುಗೊಂಡು ಶಾಲೆಗಳನ್ನು ತೆರೆಯಲಾಯಿತು ಎಂದರು.
ಕೆಪಿಸಿಸಿ ಸದಸ್ಯ ರಾಬರ್ಟ ದದ್ದಾಪುರಿ ಮಾತನಾಡಿ, ಆಲಿಪ್ತ ನೀತಿಯಿಂದ ಭಾರತಕ್ಕೆ ಭದ್ರ ಬುನಾದಿ ಹಾಕಿದ ಮುತ್ಸದ್ದಿ , ವಿದೇಶದಲ್ಲಿ ಬ್ಯಾರಿಸ್ಟರ್ ಆಗಿ ವಿದ್ಯಾಭ್ಯಾಸವನ್ನು ಮಾಡಿ ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ನೆಹರುರವರು ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು . ಭಾರತದ ಸ್ವಾತಂತ್ರಕ್ಕೋಸ್ಕರ ತನುಮನಧನಗಳಿಂದ ದುಡಿದವರಾಗಿದ್ದರು . ಅವರು ಹಾಕಿಕೊಟ್ಟ ಭದ್ರ ಬುನಾದಿಯೇ ಇಂದಿನ ಭಾರತದ ಬೆಳವಣಿಗೆಗೆ ಪೂರಕವಾಗಿದೆ . ಬ್ರಿಟಿಷರು ಸ್ವಾತಂತ್ರ್ಯವನ್ನು ಕೊಟ್ಟಾಗ ಭಾರತದಲ್ಲಿ ಅತಿಯಾದ ಬಡತನವಿತ್ತು . ಸೂಜೆಯಿಂದ ಮೊದಲುಗೊಂಡು ಭಾರತವನ್ನು ಕಟ್ಟಿದ ಮುತ್ಸದ್ದಿ ಪಂ . ಜವಾಹರಲಾಲ ನೆಹರು ಎಂದು ಕೊಂಡಾಡಿದರು.
ಪ್ರಾರಂಭದಲ್ಲಿ ರಾಜು ಎಚ್ . ಎಂ . ಸ್ವಾಗತಿಸಿದರು . ಆನಂದ ಜಾಧವ ಕಾರ್ಯಕ್ರಮ ನಿರ್ವಹಣೆ ಮಾಡಿದರು . ಕೊನೆಯಲ್ಲಿ ಶ್ರೀಮತಿ ಗೀತಾ ಥಾಂವಶಿ ವಂದಿಸಿದರು.

