ನವಂಬರ್ 5ಕ್ಕೆ ಕರ್ನಾಟಕ ರಾಜ್ಯ ಭೋವಿ ವಡ್ಡರ್ ಸಂಘದಿಂದ ಪ್ರತಿಭಾ ಪುರಸ್ಕಾರ.
ಹುಬ್ಬಳ್ಳಿ : ಕರ್ನಾಟಕ ರಾಜ್ಯ ಭೋವಿ (ವಡ್ಡರ) ಸಂಘ ಬೆಂಗಳೂರು
ವತಿಯಿಂದ 2022-23ನೇ ಸಾಲಿನ ಪ್ರತಿಭಾ ಪುರಸ್ಕಾರವನ್ನು ಎಸ್.ಎಸ್.ಎಲ್.ಸಿ , ಪಿ.ಯು.ಸಿ. ಹಾಗೂ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಪರೀಕ್ಷೆಯಲ್ಲಿ ಶೇಕಡಾ 85% ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಪಡೆದಿರುವ ಸಮಾಜದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರವನ್ನು ನವಂಬರ್ 5ರಂದು ಬೆಂಗಳೂರಿನ ನೆಲಮಂಗಲದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಭೋವಿ ವಡ್ಡರ ಸಂಘ ಅಧ್ಯಕ್ಷರು ಎಸ್ ಎಲ್ ಗಂಗಾಧರಪ್ಪ, ಐಎಎಸ್, ನಿವೃತ್ತ ಅಧಿಕಾರಿ ತಿಳಿಸಿದ್ದಾರೆ. ಪ್ರತಿ ಜಿಲ್ಲೆಗೆ ಮೂರು ಬಹುಮಾನಗಳು
ಮೊದಲನೇ ಪ್ರೋತ್ಸಾಹ ಧನ ರೂ. 15,000/- .ಎರಡನೇ ಪ್ರೋತ್ಸಾಹ ಧನ ರೂ, 10,000.ಮೂರನೇ ಪ್ರೋತ್ಸಾಹ ಧನ ರೂ, 8,000/- ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು .
ಯಾವುದೇ ಕರ್ನಾಟಕದ ವಿಶ್ವವಿದ್ಯಾಲಯದಿಂದ 2022-23ನೇ ಸಾಲಿನಲ್ಲಿ ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿಗಳಿಗೆ ರೂ, 30,000/-ಪ್ರೋತ್ಸಾಹ ಧನ ನೀಡಲಾಗುವುದು. ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನವೆಂಬರ್ 5ರಂದು ಬೆಂಗಳೂರಿನ ನೆಲಮಂಗಲದ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪ ದಲ್ಲಿ ಹಮ್ಮಿಕೊಳ್ಳಲಾಗಿದೆ . ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ನೆರವೇರಿಸುವರು. ಸಹಕಾರಿ ಸಚಿವರಾದ ಕೆಎನ್ ರಾಜಣ್ಣ . ಆಹಾರ ಸಚಿವರಾದ ಕೆ ಎಚ್ ಮುನಿಯಪ್ಪ ಹಾಗೂ ನಮ್ಮ ಸಮಾಜದ ಮಂತ್ರಿಗಳು ಶಾಸಕರು ಆಗಮಿಸಲಿದ್ದಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಕರ್ನಾಟಕ ಭೋವಿ ವಡ್ಡರ ಸಂಘ ಪ್ರಧಾನ ಕಾರ್ಯದರ್ಶಿ.ಡಾ.ಚೌಡಯ್ಯ, ಲೇಖಕರು ಮಾತನಾಡಿ 22 ವರ್ಷದಿಂದ ಬೋವಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದೇನೆ ಪ್ರತಿ ವರ್ಷ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದೇವೆ. ಭೋವಿ ವಡ್ಡರ ಸಮಾಜದ ಏಳಿಗೆಗೆ ಕರ್ನಾಟಕ ಭೋವಿ ವಡ್ಡರ ಸಂಘ ನಿರಂತರ ಶ್ರಮಿಸುತ್ತಿದೆ ಎಂದರು. ನೆಲಮಂಗಲದ ಮಾಜಿ ಶಾಸಕರಾದ ಎಂ ವಿ ನಾಗರಾಜ್ ಮಾತನಾಡಿ ಈ ಕಾರ್ಯಕ್ರಮದಲ್ಲಿ ಯೋಧರನ ಕೂಡ ಸನ್ಮಾನಿಸಿ ಗೌರವಿಸಲಾಗುವುದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ತಿಳಿಸಿದರು.
ಕರ್ನಾಟಕ ಭೋವಿ ವಡ್ಡರ ಸಂಘ ಅಧ್ಯಕ್ಷರು. ಎಸ್ ಎಲ್ ಗಂಗಾಧರಪ್ಪ, ಐಎಎಸ್, ನಿವೃತ್ತ
ಕರ್ನಾಟಕ ಭೋವಿ ವಡ್ಡರ ಸಂಘ ಪ್ರಧಾನ ಕಾರ್ಯದರ್ಶಿ.ಡಾ.ಚೌಡಯ್ಯ, ಲೇಖಕರು
ನವಂಬರ್ 5ಕ್ಕೆ ಕರ್ನಾಟಕ ರಾಜ್ಯ ಭೋವಿ ವಡ್ಡರ್ ಸಂಘದಿಂದ ಪ್ರತಿಭಾ ಪುರಸ್ಕಾರ.
