Breaking
Thu. Nov 6th, 2025

ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿಗೆ ಪಿಎಚ್ ಡಿ 

By Basavaraj Anegundi Oct 30, 2023

ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿಗೆ ಪಿಎಚ್ ಡಿ

ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ೭೩ನೇ ಘಟಿಕೋತ್ಸವದಲ್ಲಿ ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿ ಅವರಿಗೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಪಿಎಚ್ ಡಿ ಪ್ರದಾನ ಮಾಡಿದರು.

ಮೂಲತಃ‌ ಜಿಲ್ಲೆಯ ರಾಮದುರ್ಗ ತಾಲೂಕು ಚಿಕ್ಕೊಪ್ಪ (ಕೆ.ಎಸ್) ಗ್ರಾಮದ, ಸಂಯುಕ್ತ ಕರ್ನಾಟಕ ಪತ್ರಿಕೆಯ‌ ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿ “ಮೊಬೈಲ್ ಆಧಾರಿತ ಪತ್ರಿಕೋದ್ಯಮ: ಸವಾಲುಗಳು ಮತ್ತು ಅವಕಾಶಗಳು” ಮಹಾಪ್ರಬಂಧ‌ ಮಂಡಿಸಿದ್ದಾರೆ. ಪತ್ರಿಕೋದ್ಯಮ ಹಾಗೂ ಸಮೂಹ‌ ಸಂವಹನ‌ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್. ಎಂ. ಮಾಲಗತ್ತಿ ಅವರು ಮಾರ್ಗದರ್ಶನ ಮಾಡಿದ್ದಾರೆ.

Related Post