Breaking
Thu. Nov 6th, 2025

೨೯ರಂದು ಮಹಿಳೆಯರ ಉದ್ಯೋಗ ಮೇಳ.ಡಾ.ಅಜಿತ್ ಪ್ರಸಾದ್.

By Basavaraj Anegundi Oct 26, 2023

೨೯ರಂದು ಮಹಿಳೆಯರ ಉದ್ಯೋಗ ಮೇಳ ಡಾ. ಅಜಿತ್ ಪ್ರಸಾದ್

ಧಾರವಾಡ: ನಗರದ ಜೆಎಸ್ಎಸ್ ಕ್ಯಾಂಪಸ್ ನಲ್ಲಿ  ಮಹಿಳೆಯರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ರ್ಯಾಪಿಡ್ ಸಂಸ್ಥೆ ಸಹಯೋಗದಲ್ಲಿ ಅಕ್ಟೋಬರ್ ೨೯ ರಂದು ಆಯೋಜಿಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ ಮಾಹಿತಿ ನೀಡಿದರು.

ಈ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣ ವಿಚಾರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಮೂಹ ಸಂಸ್ಥೆಗಳು ಸದಾ ಕಂಕಣ ಬದ್ಧವಾಗಿದ್ದು ಈಗ ಮೂರನೇ ಬಾರಿ ಮಹಿಳೆಯರ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಅವರ ೭೫ನೇ ಜನ್ಮದಿನದ ನಿಮಿತ್ತವಾಗಿ ಕಳೆದ ವರ್ಷದಿಂದ ಸತತವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದು ೭೫ನೇ ಕಾರ್ಯಕ್ರಮ ಆಗಿದೆ ಎಂದರು.

ರ್ಯಾಪಿಡ್ ಸಂಸ್ಥೆ ಸಿಇಓ ಮಾಳವಿಕಾ ಕಡಕೋಳ ಮಾತನಾಡಿ, ಈ ಹಿಂದೆ ನಡೆದ ಉದ್ಯೋಗ ಮೇಳ ಅತ್ಯಂತ ಯಶಸ್ವಿಯಾಗಿ ನಡೆದು ಅಂದಾಜು ೧೦೦೦ ಜನರಿಗೆ ಜನರಿಗೆ ಉದ್ಯೋಗ ದೊರಕಿದೆ. ಅಕ್ಟೋಬರ್ ೨೯ ರಂದು ರವಿವಾರ ಬೆಳಿಗ್ಗೆ ೧೦ರಿಂದ ಸಂಜೆ ೬ರವರೆಗೆ ಜೆಎಸ್ಎಸ್ ಆವರಣದಲ್ಲಿ ಈ ಮಹಿಳೆಯರ ಉದ್ಯೋಗ ಮೇಳ ನಡೆಯಲಿದ್ದು ಸುಮಾರು ೪೦ ಕಂಪನಿಗಳು ಭಾಗವಹಿಸಲಿವೆ. ಕಳೆದ ಬಾರಿಗಿಂತ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ೮ ರಿಂದ ನೋಂದಣಿ ಸಹ ಆರಂಭವಾಗಲಿದ್ದು ಬೇಗನೆ ಬಂದು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಈ ಉದ್ಯೋಗ ಮೇಳದಲ್ಲಿ ಎಸ್ ಎಸ್ ಎಲ್ ಸಿ ಫಾಸಾದ ಅಥವಾ ಫೇಲಾದ ಮಹಿಳೆಯರಿಂದ ಹಿಡಿದು ಸ್ನಾತಕೋತ್ತರ ಪದವಿ ಪಡೆದವರು ಭಾಗವಹಿಸಬಹುದಾಗಿದ್ದು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.ಉದ್ಯೋಗ ಮೇಳವನ್ನು ಅಂದು ಬೆಳಿಗ್ಗೆ ೧೦ಗಂಟೆಗೆ ಡಾ. ಅಜಿತ್ ಪ್ರಸಾದ್ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಏಕಸ್ ಕಂಪನಿಯ ಡಾ.ರವಿ ಗುತ್ತಲ, ಟಾಟಾ ಮೋಟರ್ಸ್ ಅಮಿತಾವ್ ಸಹಾಯ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವಾಣಿಶ್ರೀ ಪುರೋಹಿತ ವಹಿಸಲಿದ್ದು, ಸಿಇಓ ಮಾಳವಿಕಾ ಕಡಕೋಳ, ಮಹಾವೀರ ಉಪಾಧ್ಯೆ ಸಂತೋಷ ಇಂಚಲ ಭಾಗಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ,ರ್ಯಾಪಿಡ್ ಸಂಸ್ಥೆ ಸಿಇಓ ಮಾಳವಿಕಾ ಕಡಕೋಳ, ಕಾಲೇಜಿನ ಸೂರಜ್ ಜೈನ್, ಮಹಾವೀರ ಉಪಾಧ್ಯಾಯ ಇದ್ದರು

Related Post