ಮಾತೋಶ್ರೀ ಶಾಂತಾ ವೀರಪ್ಪ ಹೆಗಡಾಳ(೮೮) ಅವರಿಗೆ ಸಂತಾಪ ಧಾರವಾಡ : ಇಲ್ಲಿಯ ರೇಣುಕಾನಗರದ ನಿವಾಸಿ, (ಮೂಲ ನರಗುಂದ) ಹಾಗೂ ಪ್ರಾಧ್ಯಾಪಕ ಡಾ. ಶಂಭು ಹೆಗಡಾಳ ಅವರ ತಾಯಿ ಮಾತೋಶ್ರೀ ಶಾಂತಾ ವೀರಪ್ಪ ಹೆಗಡಾಳ ತಮ್ಮ ೮೮ನೇ ವಯಸ್ಸಿನಲ್ಲಿ ನಿಧನರಾದರು.
ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಶರಣ ಸಂಪ್ರದಾಯದಂತೆ ಬಾಳಿ, ಬದುಕಿದ್ದ ಶ್ರಮಜೀವಿ, ಇತರರ ಕಷ್ಟ-ನೋವುಗಳಿಗೆ ಸ್ಪಂದಿಸುತ್ತಿದ್ದ ಮಾತೃಹೃದಯಿ, ಮೃದು ಸ್ವಭಾವದ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಮಾತೋಶ್ರೀ ಶಾಂತಾ ವೀರಪ್ಪ ಹೆಗಡಾಳ ಅವರ ಅಗಲುವಿಕೆಯಿಂದಾದ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬ ವರ್ಗದವರಿಗೆ ಕರುಣಿಸಲೆಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

