* ಕಿತ್ತೂರು ರಾಣಿ ಚೆನ್ನಮ್ಮ*
*KITTURU RANI CHANNAMMA *
(ಅಕ್ಟೋಬರ್ ೨೩ ೧೭೭೮-
ಫೆಬ್ರುವರಿ ೨೧ ೧೮೨೭)
ಧಾರವಾಡದಲ್ಲಿ “ಕಿತ್ತೂರು ಚೆನ್ನಮ್ಮ” “ಉದ್ಯಾನವನ”ವಿದೆ.ಅಲ್ಲಿ ಹೋದವರಿಗೆ ತಕ್ಷಣ ಕಣ್ಣಿಗೆ ಬೀಳುವದು ಎತ್ತರದ ಸ್ಥಂಭ
” ಥ್ಯಾಕರೆ ಸ್ಮಾರಕ ” ( ಥ್ಯಾಕರೆ ಸಮಾಧಿ ಕೂಡಾ ಧಾರವಾಡದಲ್ಲೇ ಇದೆ .ಶಿವಾಜಿ ಸರ್ಕಲ್ ಬಳಿ ಇರುವ ಮಟನ್ ಮಾರುಕಟ್ಟೆಯ ಪಕ್ಕದಲ್ಲಿ) ಕಿತ್ತೂರು ಚೆನ್ನಮ್ಮ ಪಾರ್ಕ್ ನಲ್ಲಿ ಎತ್ತರವಾಗಿ ಕಾಣುವ ಸ್ಮಾರಕ ನೋಡುವಾಗ ಸಹಜವಾದ ಪ್ರಶ್ನೆ ” ಇದೇನು”?.ಆಗ ಉತ್ತರಿಸಲು ರಾಣಿ ಚೆನ್ನಮ್ಮನ ಇತಿಹಾಸದ ಬಗ್ಗೆ ತಿಳಿದಿರುವ ಅಗತ್ಯವಿದೆ. ಕಿತ್ತೂರು ಕೂಡಾ ಧಾವಾಡದಿಂದ ಕೇವಲ ೩೦ ಕಿಮೀ ಅಂತರದಲ್ಲಿದ್ದು ಈಗಲೂ ಕಿತ್ತೂರು ಸಂಸ್ಥಾನದ ಕುರುಹುಗಳನ್ನು ಕಾಣಬಹುದಾಗಿದೆ.ನಾವು ಸ್ವಾತಂತ್ರ್ಯ ಪಡೆದು ೭೫ ವರ್ಷಗಳೇ ಅಗಿವೆ.ಈ ಸಂದರ್ಭದಲ್ಲಿ ಆ ಹಿಂದಿನ ನೂರಾರು ವರ್ಷಗಳ ಹೋರಾಟದ ಕ್ಷಣಗಳು ನಮ್ಮ ಮನದಲ್ಲಿ ಹಾದು ಹೋಗಬೇಕಾದ ಅಗತ್ಯವಿದೆ.ಸ್ವಾತಂತ್ರ್ಯ ಸುಲಭವಾಗಿ ದಕ್ಕಿದ್ದಲ್ಲ.ಹಗಲು ರಾತ್ರಿಗಳ ಹೋರಾಟದ ಫಲ.ಈ ದಿಶೆಯಲ್ಲಿ ಇಂದು ನೆನಪಿಸಿಕೊಳ್ಳಬೇಕಾದ ಧೀರ ಮಹಿಳೆಕಿತ್ತೂರು ರಾಣಿ ಚನ್ನಮ್ಮ.ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ರಾಣಿ ಚೆನ್ನಮ್ಮ ಕಾಕತಿಯಲ್ಲಿ (ಕರ್ನಾಟಕದ ಬೆಳಗಾವಿಯ ಉತ್ತರದಲ್ಲಿರುವ ಒಂದು ಸಣ್ಣ ಹಳ್ಳಿ) 1778 ರಲ್ಲಿ ಜನಿಸಿದರು, ಇದು ಜಾನ್ಸಿಯ ರಾಣಿ ಲಕ್ಷ್ಮಿ ಬಾಯಿಗಿಂತ ಸುಮಾರು 56 ವರ್ಷಗಳ ಹಿಂದೆ.ಚಿಕ್ಕ ವಯಸ್ಸಿನಿಂದಲೂ ಅವಳು ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆ ತರಬೇತಿ ಪಡೆದಳು. ಅವಳು ತನ್ನ ಪಟ್ಟಣದಾದ್ಯಂತ ತನ್ನ ಕೆಚ್ಚೆದೆಯ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಳು.ಚೆನ್ನಮ್ಮ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ. ಆದರೆ ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅನೇಕ ಮಹಿಳೆಯರನ್ನು ಏಳುವಂತೆ ಮಾಡಿದರು. ಆಕೆ ಕರ್ನಾಟಕ ರಾಜ್ಯದ ಕಿತ್ತೂರಿನ ಸಂಸ್ಥಾನದ ಚೆನ್ನಮ್ಮ ರಾಣಿ. ಇಂದು ಅವಳು ಕಿತ್ತೂರು ರಾಣಿ ಚೆನ್ನಮ್ಮ ಎಂದು ಪ್ರಸಿದ್ಧಳಾಗಿದ್ದಾಳೆ.ಕಿತ್ತೂರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನಲ್ಲಿದೆ. ತನ್ನ ರಾಜ್ಯದ ರಕ್ಷಣೆಗಾಗಿ ಇಂಗ್ಲಿಷರ ವಿರುದ್ಧ ಹೋರಾಡಿದ ಪ್ರಥಮ ಭಾರತೀಯ ಮಹಿಳೆ ಕಿತ್ತೂರು ಚೆನ್ನಮ್ಮ. 1772ರಿಂದ 1816ರವರೆಗೆ ರಾಜ್ಯವನ್ನಾಳಿದ ಮಲ್ಲಸರ್ಜ ದೇಸಾಯಿ ಕಿತ್ತೂರಿನ ಅರಸರಲ್ಲಿ ಪ್ರಮುಖನಾದವನು. ಮಲ್ಲಸರ್ಜ ದೊರೆಗೆ ರುದ್ರವ್ವ ಮತ್ತು ಚೆನ್ನಮ್ಮ ಇಬ್ಬರು ಹೆಂಡಂದಿರು, ಚೆನ್ನಮ್ಮ ಕಾಕತಿ ದೇಸಾಯರ ಮಗಳು. ಚೆಲುವೆ, ಯುದ್ಧ ಕಲೆಯಲ್ಲಿ ಪ್ರವೀಣಳು. ಚೆನ್ನಮ್ಮನಿಗೆ ಮಕ್ಕಳಿರಲಿಲ್ಲ. ಮಲ್ಲಸರ್ಜನ ಮರಣಾನಂತರ ರುದ್ರವ್ವಯ ಹಿರಿಯ ಮಗ ಶಿವಲಿಂಗ ರುದ್ರಸರ್ಜ ಪಟ್ಟಕ್ಕೆ ಬಂದ. ಮಕ್ಕಳಿಲ್ಲದ ರುದ್ರಸರ್ಜ ಅನಾರೋಗ್ಯದಿಂದ 1824ರಲ್ಲಿ ಮರಣಿಸಿದ. ಇದಕ್ಕೆ ಮೊದಲು ಮಾಸ್ತ ಮರಡಿ ಬಾಳಪ್ಪಗೌಡರ ಮಗ ಶಿವಲಿಂಗ ಎಂಬ ಬಾಲಕನನ್ನು ದತ್ತು ತೆಗೆದುಕೊಂಡಿದ್ದರಿಂದ ಅವನನ್ನು ಪಟ್ಟಕ್ಕೆ ಕೂಡಿಸುವ ಸಿದ್ಧತೆಯಲ್ಲಿದ್ದಾಗ,ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಸನ್ನಾಹ ನಡೆಸಿದ್ದರು. ದತ್ತಕವನ್ನು ಒಪ್ಪಲು ಬ್ರಿಟಿಷರು ನಿರಾಕರಿಸಿದರು. ಇದರಿಂದ ಕುಪಿತಗೊಂಡ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಲು ಸಿದ್ದತೆ ನಡೆಸಿದಳು. ಅರಮನೆಯ ಕಾರುಭಾರಿಗಳಾಗಿದ್ದ ಮಲ್ಲಪ್ಪಶೆಟ್ಟಿ, ವೆಂಕಟರಾಯ ಎಂಬ ದೇಶದ್ರೋಹಿಗಳಿಂದ ಈ ಸುದ್ದಿ ಧಾರವಾಡದ ಕಲೆಕ್ಟರ್ ಥ್ಯಾಕರೆಗೆ ತಿಳಿಯಿತು. 1824 ಅಕ್ಟೋಬರ್ 21 ರಂದು ಥ್ಯಾಕರೆ ಹಠತ್ತಾಗಿ ಕಿತ್ತೂರಿನ ಕೋಟೆಯ ಮೇಲೆ ಎರಗಿದ. ದಿನಾಂಕ 23 ರಂದು ಕೋಟೆಯ ಹೆಬ್ಬಾಗಿಲನ್ನು ಒಡೆಯಲು ಥ್ಯಾಕರೆ ಕ್ಯಾಪ್ಟನ್ ಬ್ಲಾಕ್‌ಗೆ ಆಜ್ಞೆ ಮಾಡಿದ. ಅಷ್ಟರಲ್ಲಿ ಕಿತ್ತೂರಿನ ಯೋಧ ಮಟೂರು ಬಾಳಪ್ಪ ಥ್ಯಾಕರೆಯನ್ನು ಗುಂಡಿಕ್ಕಿ ಕೊಂದ. ಬ್ಲಾಕ್ ಮತ್ತಿತರ ಅಧಿಕಾರಿಗಳು ಹೋರಾಟದಲ್ಲಿ ಸತ್ತರು. ನೂರಾರು ಬ್ರಿಟಿಷ್ ಸೈನಿಕರು ಸೆರೆಸಿಕ್ಕರು. ಚೆನ್ನಮ್ಮ ಈ ಸೆರೆಯಾಳುಗಳ ಬಗೆಗೆ ಉದಾರವಾಗಿ ನಡೆದುಕೊಂಡಳು.ಮೈಸೂರು, ಮದರಾಸು, ಮುಂಬಯಿ, ಸೊಲ್ಲಾಪುರ, ಇನ್ನಿತರ ಕಡೆಗಳಿಂದ ಬಂದ ಬ್ರಿಟಿಷ್ ಸೈನ್ಯ ಕಿತ್ತೂರಿನ ಮೇಲೆ ದಾಳಿ ಮಾಡಿತು. ದತ್ತುಪುತ್ರನನ್ನು ಮಾನ್ಯ ಮಾಡುವುದಾಗಿ ಚಾಪ್ಲಿನ್ ವಚನ ಕೊಟ್ಟಾಗ ಚೆನ್ನಮ್ಮ ಕೈದಿಗಳನ್ನು ಬಿಡುಗಡೆ ಮಾಡಿದಳು. ಆದರೆ ಮಾತಿಗೆ ತಪ್ಪಿದ ಚಾಪ್ಲಿನ್ ಕೋಟೆಯನ್ನು ಮುತ್ತಲು ಆಜ್ಞೆ ಮಾಡಿದ. ಇದರಿಂದ ಕ್ರೋಧಿತಳಾದ ಚೆನ್ನಮ್ಮ ಸ್ವತಃ ತನ್ನ ವೀರರೊಂದಿಗೆ ಕಾಳಗಕ್ಕೆ ಮುಂದಾದಳು ಬ್ರಿಟಿಷರ ಸುಸಜ್ಜಿತ ಆಯುಧಗಳೆದುರು ಕಿತ್ತೂರು ಪಕ್ಷಕ್ಕೆ ಸೋಲುಂಟಾಯಿತು.ಚೆನ್ನಮ್ಮ ಮತ್ತು ಸೊಸೆ ವೀರವ್ವನನ್ನು ಬಂಧಿಸಿ ಬೈಲಹೊಂಗಲದ ಸೆರೆಯಲ್ಲಿರಿಸಲಾಯಿತು. ಚನ್ನಮ್ಮ ಮತ್ತೆ ರಾಜ್ಯ ಪಡೆಯುವ ಆಸೆ ಹೊತ್ತು ಸಂಗೊಳ್ಳಿ ರಾಯಣ್ಣನಂಥ ವೀರಯೋಧರ ಗುಪ್ತ ಸಂಪರ್ಕ ಪಡೆದಳು. ಕಿತ್ತೂರಿನ ಬಿಡುಗಡೆಗಾಗಿ ಪ್ರಯತ್ನ ನಡೆಸಲು ತನ್ನ ಒಡವೆಗಳನ್ನು, ಹಣವನ್ನು ಕಳಿಸುತ್ತಾ ಅವರನ್ನು ಹುರಿದುಂಬಿಸಿದಳು. ಕೊನೆಗೆ ರಾಣಿ ಚನ್ನಮ್ಮ ತನ್ನ 57ನೇ ವಯಸ್ಸಿನಲ್ಲಿ 1829 ಫೆಬ್ರವರಿ 2 ರಂದು ಕೊನೆಯುಸಿರೆಳೆದಳು.ಚೆನ್ನಮ್ಮ ಕಾಕತಿಯಲ್ಲಿ (ಕರ್ನಾಟಕದ ಬೆಳಗಾವಿಯ ಉತ್ತರದಲ್ಲಿರುವ ಒಂದು ಸಣ್ಣ ಹಳ್ಳಿ) 1778 ರಲ್ಲಿ ಜನಿಸಿದರು, ಇದು ಜಾನ್ಸಿಯ ರಾಣಿ ಲಕ್ಷ್ಮಿ ಬಾಯಿಗಿಂತ ಸುಮಾರು56 ವರ್ಷಗಳ ಹಿಂದೆ.ಚಿಕ್ಕ ವಯಸ್ಸಿನಿಂದಲೂ ಅವಳು ಕುದುರೆ ಸವಾರಿ, ಕತ್ತಿವರಸೆ ಮತ್ತು ಬಿಲ್ಲುಗಾರಿಕೆ ತರಬೇತಿ ಪಡೆದಳು. ಅವಳು ತನ್ನ ಪಟ್ಟಣದಾದ್ಯಂತ ತನ್ನ ಕೆಚ್ಚೆದೆಯ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಳು.ಚೆನ್ನಮ್ಮ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ.ಆದರೆ ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅನೇಕ ಮಹಿಳೆಯರನ್ನು ಏಳುವಂತೆ ಮಾಡಿದರು. ಆಕೆ ಕರ್ನಾಟಕ ರಾಜ್ಯದ ಕಿತ್ತೂರಿನ ಸಂಸ್ಥಾನದ ಚೆನ್ನಮ್ಮ ರಾಣಿ. ಇಂದು ಅವಳು ಕಿತ್ತೂರು ರಾಣಿ ಚೆನ್ನಮ್ಮ ಎಂದು ಪ್ರಸಿದ್ಧಳಾಗಿದ್ದಾಳರಾಣಿ.ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧದ ಯುದ್ಧವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ನಿಜ ಆದರೆ ಇತಿಹಾಸದ ಪ್ರಪಂಚದಲ್ಲಿ ಹಲವು ಶತಮಾನಗಳ ಕಾಲ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಳು.ಒನಕೆ ಓಬವ್ವ, ಅಬ್ಬಕ್ಕ ರಾಣಿ ಮತ್ತು ಕೆಳದಿ ಚೆನ್ನಮ್ಮ ಜೊತೆಯಲ್ಲಿ, ಅವರು ಕರ್ನಾಟಕದಲ್ಲಿ ಶೌರ್ಯದ ಪ್ರತಿಮೆಯಾಗಿ ಗೌರವಿಸಲ್ಪಟ್ಟಿದ್ದಾರೆ.ರಾಣಿ ಚೆನ್ನಮ್ಮ ದಂತಕಥೆಯಾಗಿ ಮಾರ್ಪಟ್ಟಿದ್ದಾರೆ.ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ, ಬ್ರಿಟಿಷರಿಗೆ ಆಕೆಯ ಕೆಚ್ಚೆದೆಯ ಪ್ರತಿರೋಧವು ನಾಟಕಗಳು,ಹಾಡು,ಲಾವಣಿ ,ಕಥೆಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ಆದಳೆಂಬುದು ಅಭಿಮಾನದ ಸಂಗತಿ. ರಾಣಿ ಚೆನ್ನಮ್ಮ ಸದಾ ಸ್ಮರಣೀಯಳು. ಮಲ್ಲಿಕಾರ್ಜುನ ಚಿಕ್ಕಮಠ ಧಾರವಾಡ.

