ಸಾಂಸ್ಕೃತಿಕ ಹಾಗೂ ರಾಮಲೀಲಾ ಕಾರ್ಯಕ್ರಮ; ಸಂಜಯ ಕಪಟಕರ
ಧಾರವಾಡ : ದಸರಾ ಹಾಗೂ ವಿಜಯದಶಮಿಯ ಪ್ರಯುಕ್ತ ಸಾಂಸ್ಕೃತಿಕ ಹಾಗೂ ರಾಮಲೀಲಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಧಾರವಾಡ ನಗರದ ಕೆಸಿಡಿ ಮೈದಾನದಲ್ಲಿ ವಿಜಯ ದಶಮಿ, ಸಾಂಸ್ಕೃತಿಕ ರಾಮಲೀಲಾ ಉತ್ಸವ ಸಮಿತಿ, ಧಾರವಾಡ ಹಾಗೂ ನಂದಗೋಕುಲ ಸ್ವಯಂಸೇವಾ ಸಂಸ್ಥೆಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಲಿದ್ದು, ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಶಂಕರ ಶಳಕೆ, ನಿತೀನ್ ಇಂಡಿ, ಮುಖಂಡರಾದ ರಾಕೇಶ್ ನಾಜರೇ, ಸುನೀಲ ಮೋರೆ, ಮೋಹನ್ ರಾಮದುರ್ಗ ಸೇರಿದಂತೆ ಹಲವರು ಇದ್ದರು.

