ಪೊಲೀಸರ ಕಣ್ತಪ್ಪಿಸಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಕಳ್ಳರನ್ನು 20 ಕಿಲೋಮೀಟರ್ ಬೆನ್ನಟ್ಟಿ ಹೆಡೆಮುರಿ ಕಟ್ಟಿದ್ದಾರೆ ಕೊರಟಗೆರೆ ಪೊಲೀಸರು. ಕೊರಟಗೆರೆಯ ಬಸವರಾಜು ಬಿ.ಸಿ. (26), ಮಧುಗಿರಿಯ ಮಂಜು ನಾಥ್ (28), ಬೆಂಗಳೂರಿನ ನಿರಂಜನ್ (32) ಮತ್ತು ತುಮಕೂರಿನ ಗೋವಿಂದ ಪ್ರಸಾದ್ (42) ಬಂಧಿತರು. ನಾನಾ ಕಳ್ಳತನ ಪ್ರಕರಣದಲ್ಲಿ ಇವರು ಭಾಗಿಯಾಗಿದ್ದರು.

