Breaking
Thu. Sep 18th, 2025

ಜುಲೈ 6ಕ್ಕೆ ಪಂಚಮಸಾಲಿ ಪ್ರತಿಭಾ ಪುರಸ್ಕಾರ. ಪೂಜಾ ಸೌವದತ್ತಿ.

By Basavaraj Anegundi Jul 5, 2025

ಜುಲೈ 6ಕ್ಕೆ ಪಂಚಮಸಾಲಿ ಪ್ರತಿಭಾ ಪುರಸ್ಕಾರ. ಪೂಜಾ ಸೌವದತ್ತಿ                                                       .ಧಾರವಾಡ : 2024-25 ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎಸ್.ಎಸ್.ಎಲ್.ಸಿ.ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪಂಚಸೇನಾ ಕಿತ್ತೂರುಕರ್ನಾಟಕ ವಿಭಾಗ, ಧಾರವಾಡ ಮಹಿಳಾ ಘಟಕ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಪ್ರತಿಭಾ ಪರಸ್ಕಾರ ಸಮಾರಂಭವನ್ನು ರವಿವಾರದಂದು ಧಾರವಾಡದ ಸಿ.ಬಿ.ನಗರದ ಹಳಿಯಾಳ ರಸ್ತೆಯಲ್ಲಿರುವ ಲಿಂಗಾಯತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಂಚಸೇನಾ ಕಿತ್ತೂರುಕರ್ನಾಟಕ ವಿಭಾಗ ಅಧ್ಯಕ್ಷರಾದ ಪೂಜಾ ಸವದತ್ತಿ ಹೇಳಿದರು.                                                                                                             ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಇವರ ಸಹಯೋಗದೊಂದಿಗೆ ಪ್ರಥಮ ಬಾರಿಗೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ

 ಈ ಕಾರ್ಯಕ್ರಮ ರಾಜ್ಯದಲ್ಲಯೇ ಪ್ರಪ್ರಥಮಬಾರಿಗೆ ಹಮ್ಮಿಕೊಳ್ಳಲಾಗಿದೆ ಸಾನಿಧ್ಯವನ್ನು ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ್ ಪಂಚಮಸಾಲಿ ಜಗದ್ಗುರು ಮಹಾ ಪೀಠ ಧರ್ಮಕ್ಷೇತ್ರ ಕೂಡಲಸಂಗಮ ವಹಿಸುವರು. ಉದ್ಘಾಟಕರಾಗಿ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯ ಅತಿಥಿಗಳಾಗಿ ಶಾಸಕ, ಮಾಜಿ ಸಚಿವರಾದ ಸಿ.ಸಿ.ಪಾಟೀಲ ಆಗಮಿಸಲಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಇವರಿಗೆ ಗೌರವ ಸನ್ಮಾನ ಆಯೋಜಿಸಲಾಗಿದೆ. ಪೋಲಿಸ್ ಅಧಿಕಾರಿಯಾಗಿರುವ ಸಾಹಿತಿ ಬಸವರಾಜ ಯಲಿಗಾರ ರಚಿಸಿರುವ ಶಿವಶರಣ ಬಸವೇಶ್ವರರ ವಚನಗಳ ಇಂಗ್ಲೀಷ್ ಭಾಷೆಗೆ ಅನುವಾದವಾಗಿರುವ ಮೈ ಮಿ ಈಸ ದಿ ಕೃತಿಯ ಪರಿಚಯ ಹಾಗೂ ಅವರಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ.ಸುಮಾರು 150 ವಿದ್ಯಾರ್ಥಿಗಳು ಪಾಲ್ಗೊಳಿದಾರೆ. ಜಿಲ್ಲೆಯ ಏಳು ತಾಲೂಕಿನ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಈ ಕಾರ್ಯಕ್ರಮಕ್ಕೆ ಸಹಕಾರ ನೀಡುವವರು ಸಮಾಜದ ಹಿರಿಯರು ಜಿಲ್ಲಾಧ್ಯಕ್ಷರು ಪಂಚಮಸಾಲಿ ಮಹಾಸಭಾ ನಿಂಗಣ್ಣ ಕರಿಕಟ್ಟಿ , ಹಾಗೂ ಪಂಚ ಸೇನಾ ಪದಾಧಿಕಾರಿಗಳು ಬಸವರಾಜ ಬಡಿಗೇರ, ಮಂಜುನಾಥ್ ಶಹಪುರ್ , ರೇಖಾ ಕಜೆರ್ , ಕಮಲ ದೇಸಾಯಿ, ಮಾದೇವಿ , ಸುಧಾ ಕಬ್ಬೂರ . ಪಂಚ ಸೇನಾ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರು ಸೇರಿ ರಾಜ್ಯ ಹಾಗೂ ಜಿಲ್ಲಾ ತಾಲೂಕ ಪಂಚ ಸೇನಾ , ಕಿತ್ತೂರ್ ಕರ್ನಾಟಕ ವಿಭಾಗದ ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ.ಈ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಎಂದು ಪಂಚ ಸೇನಾ ಕಿತ್ತೂರು ಕರ್ನಾಟಕ ಮಹಿಳಾ ಘಟಕದ ಅಧ್ಯಕ್ಷೆ ಪೂಜಾ ಸವದತ್ತಿ ಹಾಗೂ ಧಾರವಾಡ ಪಂಚ ಸೇನಾ ಜಿಲ್ಲಾ ಅಧ್ಯಕ್ಷೆ ವಿಜಯಲಕ್ಷ್ಮಿ ತಿಳಿಸಿದರು.

 

Related Post