Breaking
Thu. Sep 18th, 2025

ಜೂನ್ 15 ರಂದು ಬುದ್ಧ, ಬಸವ ಮತ್ತು ಅಂಬೇಡ್ಕರ ಕುರಿತು ಒಂದು ದಿನದ ವಿಚಾರ ಸಂಕಿರಣ ಆಯೋಜನೆ*

By Basavaraj Anegundi Jun 14, 2025

*ಜೂನ್ 15 ರಂದು ಬುದ್ಧ, ಬಸವ ಮತ್ತು ಅಂಬೇಡ್ಕರ ಕುರಿತು ಒಂದು ದಿನದ ವಿಚಾರ ಸಂಕಿರಣ ಆಯೋಜನೆ*

*ಧಾರವಾಡ : ಜೂ.14: ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕಗಷತೆಯಲ್ಲಿ ಸಂತೋಷ ಲಾಡ್ ಫೌಂಡೇಶನ್‍ದಿಂದ ಜೂನ್ 15 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆಯವರೆಗೆ ಬುದ್ಧ, ಬಸವ ಮತ್ತು ಅಂಬೇಡ್ಕರ ಅವರ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಲಾಗಿದೆ.

 

ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

 

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬಾಗಲಕೋಟ ಹಾಗೂ ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಹರಿಹರ ಬೆಳ್ಳೂಡಿಯ ಕನಕ ಗುರುಪೀಠದ ಕಾಗಿನೆಲೆ ಮಹಾಸಂಸ್ಥಾನ ಜಗದ್ಗುರು, ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಜಗದ್ಗುರು ಕುಂಚಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶಾಂತವೀರ ಸ್ವಾಮೀಜಿ, ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಜಗದ್ಗುರು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ, ಭಗೀರಥ (ಉಪ್ಪಾರ) ಗುರುಪೀಠದ ಜಗದ್ಗುರು ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಚಿತ್ರದುರ್ಗ ಯಾದವ ಮಹಾಸಂಸಾತತರ) ಗುರುಪೀಠದ ಜಗದ್ಗುರು ಕೃಷ್ಣಯಾದುವಾಗ ಸ್ವಾಮಿಗಳು, ರಾಜನಳ್ಳಿ-ಹರಿಹರ ಶ್ರೀ ವಾಲ್ಮೀಕಿಗುರುಪೀಠದ ವಾಲ್ಮೀಕಿ ಪ್ರಸನ್ನಾನಂಜಪುರಿ ಮಹಾಸ್ವಾಮಿಗಳು, ಚಿತ್ರದುರ್ಗ ಮಚೀದೇವಾ ಮಹಾಸಂಸ್ಥಾನ ಮಠ, ಮಡಿವಾಳ ಗುರುಪೀಠದ ಬಸವ ಮಾಚೀದೇವ ಮಹಾಸ್ವಾಮಿಗಳು, ಶಿವಮೊಗ್ಗ ತೀರ್ಥಹಳ್ಳಿ ನಾರಾಯಣ ಗುರು ಮಹಾಸಂಸ್ಥಾನದ ಆರ್ಯರೇಣುಕಾನಂದ ಮಹಾಸ್ವಾಮಿಗಳು, ಬೆಳಗಾವಿ ಅಥಣಿ ತೆಲಸಂಗದ ಕುಂಬಾರ ಗುಂಡಯ್ಯ ಗುರುಪೀಠದ ಜಗದ್ಗುರು ಬಸವ ಕುಂಬಾರಗುಂಡಯ್ಯಾ ಮಹಾಸ್ವಾಮಿಗಳು, ಚಿತ್ರದುರ್ಗ ಮೇದಾರ ಗುರುಪೀಠದ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ, ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ, ಹರಿಹರ ಎರೇ ಹೊಸಹಳ್ಳಿ ವೇಮನ ಮಹಾಸಂಸ್ಥಾನ ಮಠದ ಜಗದ್ಗುರು ವೇಮನಾನಂದ ಮಹಾಸ್ವಾಮಿಗಳು, ಹಾವೇರಿ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ ರೆಡ್ಡಿ ಗುರುಪೀಠ, ಜ. ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಜಯಪುರ ಮುದ್ದೇಬಿಹಾಳ ಹಡಪದಗುರುಪೀಠದ ಜಗದ್ಗುರು ಅನ್ನಧಾನಿ ಭಾರತೀ ಅಪ್ಪಣ್ಣ ಮಹಾಸ್ವಾಮಿಗಳು ಹಾಗೂ ತುಮಕೂರು ಗುಬ್ಬಿ ಹೆಳವ ಗುರುಪೀಠದ ಬಸವ ಬೃಂಗೇಶ್ವರ ಮಹಾಸ್ವಾಮಿಗಳು ವಿಚಾರ ಸಂಕಿರಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.

 

*ಗೋಷ್ಟಿ 1:* ಭಗವಾನ್ ಬುದ್ಧರ ಕುರಿತು ಬೆಳಿಗ್ಗೆ 10 ಗಂಟೆಯಿಂದ 11:30 ಗಂಟೆಯವರೆಗೆ ಉಪನ್ಯಾಸಕರಿಂದ ಉಪನ್ಯಾಸ ನಡೆಯುವವು.

 

ಬುದ್ಧನ ಅμÁ್ಟಂಗ ಮಾರ್ಗ- ಒಂದು ವೈಜ್ಞಾನಿಕ ನೋಟ ಎಂಬ ವಿಷಯವನ್ನು ಧಾರವಾಡ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ. ಡಾ. ಸಂಜೀವ ಕುಲಕರ್ಣಿ, ಬುದ್ಧನ ಭೋಧನೆಗಳಲ್ಲಿ ಮಹಿಳೆಯರ ಸ್ಥಾನಮಾನ ಎಂಬ ವಿಷಯದ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಬೋಧಕರು ಡಾ. ಅನಸೂಯ ಕಾಂಬಳೆ, ಪ್ರಚಲಿತ ವಿಶ್ವದಲ್ಲಿ ಬೌದ್ಧ ಧರ್ಮದ ಪ್ರಸ್ತುತತೆ ಎಂಬ ವಿಷಯದ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ವಿಭಾಗ ಬೋಧಕರು ಡಾ. ಶಿಲಾಧರ ಮುಗಳಿ ಅವರು ಉಪನ್ಯಾಸವನ್ನು ಮಾಡುವರು.

 

ಹರಿಹರ ಬೆಳ್ಳೂಡಿ ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರು ಅಧ್ಯಕ್ಷೀಯ ನುಡಿ ಮಾಡುವರು.

 

*ಗೋಷ್ಟಿ 2:* ಶ್ರೀ ಬಸವೇಶ್ವರರ ಕುರಿತು ಬೆಳಿಗ್ಗೆ 11:30 ಗಂಟೆಯಿಂದ 1 ಗಂಟೆಯವರೆಗೆ ಉಪನ್ಯಾಸಕರಿಂದ ಉಪನ್ಯಾಸ ನಡೆಯುವವು.

 

ಶರಣರ ಷಟ್ ಸ್ಥಲ – ಒಂದು ವೈಜ್ಞಾನಿಕ ನೋಟ ಎಂಬ ವಿಷಯದ ಕುರಿತು ಬೆಳಗಾವಿ ಕೆ.ಎಲ್.ಇ. ವಿಶ್ವವಿದ್ಯಾಲಯ ವೈದ್ಯ ಡಾ. ಅವಿನಾಶ ಕವಿ, ಸಮಾನತೆ ಮತ್ತು ಅಂತರ್ಜಾತಿ ವಿವಾಹ-ಬಸವಣ್ಣನ ಉತ್ತುಂಗ ಸಾಧನೆ ಎಂಬ ವಿಷಯದ ಕುರಿತು ಅಳ್ಳಾವರ ಸರ್ಕಾರಿ ಮಹಾವಿದ್ಯಾಲಯ ಭೋಧಕರು ಡಾ. ವಿನಯಾ ವಕ್ಕುಂದ, ಕಾಯಕ ಮತ್ತು ದಾಸೋಹ: ಸಾಮಾಜಿಕ ನ್ಯಾಯದ ಶ್ರೇಷ್ಠ ಪರಿಕಲ್ಪನೆ ಎಂಬ ವಿಷಯದ ಕುರಿತು ಖ್ಯಾತ ಚಿಂತಕರು, ಮತ್ತು ಸಾಹಿತಿ ಡಾ. ರಂಜಾನ್ ದರ್ಗಾ ಅವರು ಉಪನ್ಯಾಸ ನೀಡುವರು.

 

ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಅಧ್ಯಕ್ಷೀಯ ನುಡಿ ಮಾಡುವರು.

 

*ಗೋಷ್ಟಿ 3:* ಡಾ. ಅಂಬೇಡ್ಕರ ಕುರಿತು ಮಧ್ಯಾಹ್ನ 2 ಗಂಟೆಯಿಂದ 3 ವರೆಗೆ ಉಪನ್ಯಾಸಕರಿಂದ ಉಪನ್ಯಾಸ ನಡೆಯುವವು.

 

ಅಂಬೇಡ್ಕರ ಸಮಾನತೆ ಮತ್ತು ಭಾರತದ ಸಂವಿಧಾನ ಎಂಬ ವಿಷಯದ ಕುರಿತು ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಕಾನೂನು ನಿಕಾಯರಾದ ಡಾ. ಎಂ. ವಿಶ್ವನಾಥ, ಜಾತಿ ವಿನಾಶ ಮತ್ತು ಅಂಬೇಡ್ಕರ ಎಂಬ ವಿಷಯದ ಕುರಿತು ಖ್ಯಾತ ಸಾಹಿತಿಗಳು ಮತ್ತು ಚಿಂತಕ ಡಾ. ಸದಾಶಿವ ಮರ್ಜಿ ಹಾಗೂ ಅಂಬೇಡ್ಕರ ಮತಾಂತರ ಮತ್ತು ಅದರ ಪರಿಣಾಮಗಳು ಎಂಬ ವಿಷಯದ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗ ಬೋಧಕರು ಡಾ. ಸದಾನಂದ ಬಿ. ಸುಗಂಧಿ ಅವರು ಉಪನ್ಯಾಸ ನೀಡುವರು.

ಹರಿಹರ ರಾಜನಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿ ಅವರು ಅಧ್ಯಕ್ಷೀಯ ನುಡಿ ಮಾಡುವರು.

 

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಹಾಗೂ ಬಾಲಕೋಟೆ ಭೋವಿ ಗುರುಪೀಠದ ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಸಮಾರೂಪ ನುಡಿಗಳನ್ನು ಮಾಡುವರು.

ನಂತರ ಲಘು ಸಂಗೀತ, ಮನರಂಜನೆ ಜರುಗುತ್ತವೆ ಎಂದು ಪ್ರಕಟಣೆ ತಿಳಿಸಿದೆ.

Related Post