ಧಾರವಾಡ :
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕರ್ನಾಟಕ ಎಜುಕೇಶನ್ ಬೋರ್ಡ್ ನ ಅಂಗ ಸಂಸ್ಥೆ ರಾಷ್ಟ್ರೀಯ ಶಾಲೆ ಯಾದ ಕರ್ನಾಟಕ ಪ್ರೌಢಶಾಲೆ ಯಲ್ಲಿ ಎನ್ ಸಿ ಸಿ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ತಜ್ಞ, ಚಿಂತಕರು ಹಾಗೂ ವಿಶ್ರಾಂತ ಎನ್ ಸಿ ಸಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಚಿಕ್ಕಮಠ ಅವರು ಮಾತನಾಡಿ-“ಎನ್ ಸಿ ಸಿ ಯಿಂದ ಮಕ್ಕಳು ಹತ್ತು ಹಲವಾರು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.
ಶಿಸ್ತು,ಸಂಯಮ, ಒಗ್ಗಟ್ಟು,ಭ್ರಾತ್ರತ್ವ, ಐಕ್ಯತೆ,ಆತ್ಮ ವಿಶ್ವಾಸ ಹಾಗೂ ದೇಶಪ್ರೇಮ ಬೆಳೆಸುವಲ್ಲಿ ಎನ್ ಸಿ ಸಿ ಪೂರಕವಾಗಿದೆ.. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು, ಭವಿಷ್ಯವನ್ನು ರೂಪಿಸಿಕೊಳ್ಳಬೇಕು”. ಎಂದು ಸಲಹೆ ನೀಡಿದರು..
ಪ್ರೌಢಶಾಲಾ ಎನ್ ಸಿ ಸಿ ಅಧಿಕಾರಿಗಳಾದ ವಿ ಬಿ ಶಿಂಗೆ ಅವರು ಕಾರ್ಯಕ್ರಮ ವನ್ನು ಸಂಯೋಜಿಸಿ, ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಎನ್ ಸಿ ಸಿ ಕೆಡೆಟ್ ಗಳಿಂದ ಪಥಸಂಚಲನ ಹಾಗೂ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಲಾಯಿತು..
ಪ್ರಾಂಶುಪಾಲರಾದ ಎನ್ ಎನ್ ಸವಣೂರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ- ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು..
ಹಿರಿಯ ಶಿಕ್ಷಕರಾದ ಕೆ ಸಿ ಪ್ರಕಾಶ್, ಎಸ್ ಎಂ ಬೋಂಗಾಳೆ, ಲಕ್ಷ್ಮೀ ಪಾಟೀಲ್
ಮುಂತಾದವರು ಉಪಸ್ಥಿತರಿದ್ದರು.