Breaking
Thu. Sep 18th, 2025

ಬಸವಾದಿ ಶರಣರ ವಚನ ಸಾಹಿತ್ಯ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು – ವೀರಣ್ಣ ರಾಜೂರ..     

By Basavaraj Anegundi Feb 2, 2025

ಬಸವಾದಿ ಶರಣರ ವಚನ ಸಾಹಿತ್ಯ

ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು – ವೀರಣ್ಣ ರಾಜೂರ

 

ಧಾರವಾಡ :

ಬಸವಾದಿ ಶರಣರ ವಚನ ಸಾಹಿತ್ಯದ ಅಧ್ಯಯನದಿಂದ ಪ್ರಗತಿಪರ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯ ಕೇವಲ ಶರಣರ ವಚನಗಳನ್ನು ಅಧ್ಯಯನ ಮಾಡಿದರೆ ಸಾಲದು ಅವುಗಳನ್ನು ‌ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು

ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.

 

ಅವರು ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಅಧ್ಯಯನ ಪೀಠದ ಶ್ರೀ ಅಲ್ಲಮಪ್ರಭು ಸಭಾಂಗಣದಲ್ಲಿ ಆಯೋಜಿಸಿದ ಶಂಕ್ರಪ್ಪ ಎಸ್. ತೇಲಿ ಮತ್ತು ಪರೂತಗೌಡರ ಚನ್ನಪ್ಪಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

 

ಶರಣರು ಹನ್ನೆರಡನೆಯ ಶತಮಾನದಲ್ಲಿ ಸಮಾಜಿಕ

ಧಾರ್ಮಿಕ ವೈಚಾರಿಕ ಕ್ರಾಂತಿಯನ್ನು ಮಾಡಿದರು. ವ್ಯಕ್ತಿ ತಾರತಮ್ಯ ಶ್ರೇಣೀಕೃತ ಜಾತಿ ತಾರತಮ್ಯ ದೇವರಲ್ಲಿನ ಬೇಧಭಾವ ಹೋಗಲಾಡಿಸಲು ಶ್ರಮಿಸಿದರು. ನುಡಿದಂತೆ ನಡೆದರು ಅಂತೆಯೇ ವಚನಗಳನ್ನು ನಾವೆಲ್ಲರೂ ನಿತ್ಯ ಜೀವನದಲ್ಲಿ ಪಚನಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.

 

ಕೆ.ಎಲ್.ಈ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥರಾದ ವೀಣಾ ಹೂಗಾರ ಮಾತನಾಡಿ. ಶರಣರು ಯಾವುದೇ ಜಾತಿಗೆ ಸೀಮಿತವಾಗಿಲ್ಲ ಹುಟ್ಟಿನಿಂದ ಬಂದ ಶ್ರೇಷ್ಠ ಕನಿಷ್ಠ ಪರಿಕಲ್ಪನೆಯನ್ನು ಅವರು ವಿರೋಧಿಸಿದರು, ಹೆಣ್ಣುಮಕ್ಕಳ ಸಮಾನತೆಗೆ ಧ್ವನಿ ಎತ್ತಿದರು ತಳಸಮುದಾಯವನ್ನು ಅಪ್ಪಿಕೊಂಡರು.ತಾವು ಆಳಿದರು ವಚನ ಉಳಿಯಬೇಕೆಂದು ಅವರ ನಿಲುವಾಗಿತ್ತು. ವಚನ ಸಾಹಿತ್ಯದಲ್ಲಿ ಶರಣೆಯರ ಕೊಡುಗೆ ಅಪಾವಾದದ್ದು, ಶರಣರ ಆಶಯವನ್ನು ಅರ್ಥೈಸಿಕೊಂಡು ಓದುವ ಕೆಲಸವಾಗಬೇಕಿದೆ ಎಂದು ಹೇಳಿದರು.

 

ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಕ.ವಿ.ವಿ ಸಂಗೀತ ವಿಭಾಗದ ಮುಖ್ಯಸ್ಥ ಡಾ.ಮೃತ್ಯುಂಜಯ ಅಗಡಿ ಮಾತನಾಡಿ ಸಮಾಜವನ್ನು ತಿದ್ದಲು ವಚನ ಸಾಹಿತ್ಯ ಅವಶ್ಯಕವಾಗಿದೆ. ವಚನಗಳ ಸಾಹಿತ್ಯವು ಜೀವದ ಮಾರ್ಗವನ್ನು ತಿಳಿಸುತ್ತದೆ ಎಂದ ಅವರು ಬಸವಾದಿ ಶರಣರ ಮತ್ತು ದಾರ್ಶನಿಕರ ಚಿಂತನೆ ಮತ್ತು ತತ್ವಗಳನ್ನು ಪ್ರತಿಯೊಬ್ಬ ವ್ಯಕ್ತಿ ಅಳವಡಿಕೊಳ್ಳಬೇಕು ಎಂದರು.

 

ಕಾರ್ಯಕ್ರಮದಲ್ಲಿ ಬಸವ ಅಧ್ಯಯನ ವಿಭಾಗ ಸಂಯೋಜಕ ಡಾ. ಸಿ.ಎಂ. ಕುಂದಗೋಳ ,ಡಾ.ಈರಣ್ಣ ಇಂಜಗನೇರಿ, ಕುಮಾರ ಮಂಗಳಗಟ್ಟಿ, ಶಂಕರ ಕುಂಬಿ, ದತ್ತಿದಾನಿಗಳಾದ ಕುಮಾರ ತೇಲಿ, ಮತ್ತು ಸುಜಾತಾ ತೇಲಿ ಇದ್ದರು. ನಂದಾ ಹೆಗ್ಗೆರಿ ನಿರೂಪಿಸಿದರು. ಭಾರ್ಗವಿ ವಂದಿಸಿದರು.

Related Post