ದಲಿತರ ಮೇಲೆ ಶೋಷಣೆ ತಪ್ಪಿಸಲು ಸಂಘಟಿತರಾಗಿ: ಮಂಜುನಾಥ ಹಿರೇಮನಿ.
ಧಾರವಾಡ: ದಲಿತರ ಮೇಲೆ ನಿತ್ಯ ರಾಜ್ಯಾದ್ಯಂತ ಶೋಷಣೆ ನಡೆಯುತ್ತಿದೆ. ಅದನ್ನು ತಪ್ಪಿಸಲು ದಲಿತಪರ ಸಂಘಟನೆಗಳು ಜಾಗೃತವಾಗಬೇಕಾಗಿದೆ ಎಂದು ಕೆಂಪು ಸೈನ್ಯ ಉತ್ತರ ಕರ್ನಾಟಕ ಘಟಕದ ಕಾರ್ಯಾಧ್ಯಕ್ಷ ಮಂಜುನಾಥ ಹಿರೇಮನಿ ಹೇಳಿದರು.
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮಿತಿ (ಕೆಂಪುಸೇನೆ ) ವತಿಯಿಂದ ಧಾರವಾಡ ಜಿಲ್ಲಾ ಸಮಿತಿ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಪ್ರತಿಯೊಂದು ಯೋಜನೆಗಳು ಸರಿಯಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಆ ನಿಟ್ಟಿನಲ್ಲಿ ಸಂಘಟನೆ ಕಾರ್ಯಕರ್ತರು ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಕೆಂಪುಸೇನೆ ) ಅಧ್ಯಕ್ಷರಾದ ವಿ.ಬಿ.ರಾಮಚಂದ್ರ, ಉತ್ತರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ರಾಜ್ಯಾದ್ಯಂತ ಉತ್ತಮ ಕೆಲಸ ಮಾಡುತ್ತಿದೆ. ಪ್ರತಿ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಸಂಘಟನೆಯ ನೇಮಾನುಸಾರ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ. ಸಂಘಟನೆ ನಿರಂತರ ತಮ್ಮ ಬೆಂಬಲಕ್ಕೆ ಇರುತ್ತದೆ. ಅನ್ಯಾಯಕ್ಕೆ ಒಳಗಾದವರು ನಮ್ಮನ್ನು ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಂಜುನಾಥ ಮಲ್ಲಪ್ಪ ಕಟ್ಟಿ ಹಿರಿಯ ಸಲಹೆಗಾರರು ಉತ್ತರ ಕರ್ನಾಟಕ , ಹನುಮಂತ ನಾಗಪ್ಪ ತಳವಾರ ಉಪಾಧ್ಯಕ್ಷರು ಉತ್ತರ ಕರ್ನಾಟಕ, ನವೀನ್ ಎಚ್ ಟಿ ಎನ್ ಕಾನೂನು ಸಲಹೆಗಾರರು ಜಿಲ್ಲಾ ಧಾರವಾಡ ಸುರೇಶ್ ಮದರ್ ಉಪಾಧ್ಯಕ್ಷರು ಧಾರವಾಡ ಜಿಲ್ಲಾ ಶ್ರೀ ಜಯಶ್ರೀ ಮಹಿಳಾ ಅಧ್ಯಕ್ಷರು ಧಾರವಾಡ ಜಿಲ್ಲಾ ಅಭಿಲಾಶ್ ವೀರಣ್ಣ ಮಂದಳ್ಳಿ ಯುವ ಘಟಕ ಅಧ್ಯಕ್ಷರು ಧಾರವಾಡ ಜಿಲ್ಲಾ ಸುರೇಶ ಮದರ್ ಉಪಾಧ್ಯಕ್ಷರು ಧಾರವಾಡ ಜಿಲ್ಲಾ ವೀರೇಶ್ ಪ್ರಕಾಶ್ ಉತ್ತನಹಳ್ಳಿ ಉಪಾಧ್ಯಕ್ಷರು ಬಸನಗೌಡ ಪಾಟೀಲ ಕಾರ್ಯದರ್ಶಿ ಧಾರವಾಡ ಜಿಲ್ಲಾ ವಿಜಯ್ ಬಂಡಿ ವಡ್ಡರ್ ಕಿತ್ತೂರ್ ತಾಲೂಕ ಅಧ್ಯಕ್ಷರು ವಿನೋದ್ ವಡ್ಡರ್ ಉಪಾಧ್ಯಕ್ಷರು ಕಿರಣ್ ಹುಬ್ಬಳ್ಳಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಲ್ಲು ಡರ್ ಕಾರ್ಯದರ್ಶಿ ನಾಗೇಶ್ ಕಲ್ಡರ್ ಸದಸ್ಯರು ಅಧ್ಯಕ್ಷರು ಜಿಲ್ಲಾ ಬಾಗಲಕೋಟಿ ಹನುಮಂತ್ ಸಿದ್ದಪ್ಪ ಕೆರೆವನ್ನವರ್ ಕಾರ್ಯದರ್ಶಿ ಜಿಲ್ಲಾ ಬಾಗಲಕೋಟೆ ಹೊಳೆಪ್ಪ ಬಾಳಪ್ಪ ನಾಯಕ್ ಜಿಲ್ಲಾ ಸದಸ್ಯರು ಬಾಗಲಕೋಟೆ ವಿಜಯಕುಮಾರ್ ತಿಪ್ಪಣ್ಣ ಗಾಳಿ ಸದಸ್ಯರು ಲಕ್ಷ್ಮಿ ಮಂಜುನಾಥ್ ಬಂಡಿ ವಡ್ಡರ್. ಬಾಗಲಕೋಟೆ ಜಿಲ್ಲಾ ಈ ಸಂದರ್ಭದಲ್ಲಿ ಗಣೇಶಂಬೋಳಿ ಪ್ರಧಾನ ಕಾರ್ಯದರ್ಶಿ ಹಳಿಯಾಳ ದಾಂಡೇಲಿ ಜೋಡ ಮೀನಾಕ್ಷಿ ಮಾದರ್ ದಾಂಡೇಲಿ ಅಧ್ಯಕ್ಷರು ಲಕ್ಷ್ಮಣ್ ದ ನಗರ ಕಾರ್ವಾರ್ ಅಧ್ಯಕ್ಷರು ಮಾಜಿ ಹೀಗೆ ಅನೇಕರು ಉಪಸ್ಥಿತರಿದ್ದರು. ಬಸವರಾಜ್ ವಡ್ಡರ್ ನಿರೂಪಿಸಿದರು. ರಘು ದೊಡ್ಡಮನಿ ಸ್ವಾಗತಿಸಿದರು.
ವಿನಾಯಕ್ ಯಲ್ಲಪ್ಪ ಜೋಡಳ್ಳಿ ಧಾರವಾಡ ಜಿಲ್ಲಾ ಸದಸ್ಯರು, ನಾಗೇಶ್ ಮಡಿವಾಳಪ್ಪ ಬಟಾಕುರ್ಕಿ ಧಾರವಾಡ ತಾಲೂಕು ಅಧ್ಯಕ್ಷರು, ಮನೋಜ ಶಿವಾನಂದ ಕಂದಗಲ್ಲ ಉತ್ತರ ಕರ್ನಾಟಕ ಸದಸ್ಯರು, ತಿರುಪತಿ ತಿಮ್ಮಣ್ಣ ಹಿರೇಮನಿ ಧಾರವಾಡ ಜಿಲ್ಲಾ ಸದಸ್ಯರು, ಕಸ್ತೂರಿ ತಿಮ್ಮಣ್ಣ ಹಿರೇಮನಿ ಧಾರವಾಡ ಮಹಿಳಾ ಸದಸ್ಯರು, ಮಲ್ಲಮ್ಮ ಬಿಸನಲ್ಲಿ ಧಾರವಾಡ ಮಹಿಳಾ ಸದಸ್ಯರು, ಶುಶ್ಮ ಅಭಿಲಾಷ್ ಮಾವಳ್ಳ ಮಹಿಳಾ ಉಪಾಧ್ಯಕ್ಷರು ಧಾರವಾಡ ಜಿಲ್ಲಾ, ಜಯಶ್ರೀ ಮಂಜುನಾಥ ಕಮ್ಮಾರ ಮಹಿಳಾ ಅಧ್ಯಕ್ಷರು ಧಾರವಾಡ ಜಿಲ್ಲಾ, ನಾಗರಾಜ್ ಹಣಮಂತಪ್ಪಾ ಮಂಡೆಕರ ಧಾರವಾಡ ಜಿಲ್ಲಾ ಸದಸ್ಯರು, ವಿರುಪಾಕ್ಷಿ ಅಶೋಕ ಶಿರಾಳಶೆಟ್ಟಿ ಧಾರವಾಡ ಜಿಲ್ಲಾ ಕಾರ್ಯದರ್ಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
